ಕಪೆಲ್ಲಾ : ಆರಿಗಾ (ನೋಡಿ- ಆರಿಗಾ) ನಕ್ಷತ್ರ ಪುಂಜದ ಅತ್ಯಂತ ಉಜ್ವಲ ನಕ್ಷತ್ರ. ಶಾಸ್ತ್ರನಾಮ ``ಚಿ-ಆರಿಗಾ’’. ಇದೊಂದು ರೋಹಿತ ಯಮಳ ನಕ್ಷತ್ರ (ಸ್ಪೆಕ್ಟ್ರೋಸ್ಕೊಪಿಕ್ ಬೈನರಿ ಸ್ಟಾರ್). ಇದರ ಪರಿಭ್ರಮಕಾವಧಿ 104 ದಿವಸಗಳು. ಘಟಕ ನಕ್ಷತ್ರಗಳ ದ್ರವ್ಯರಾಶಿಗಳು ಸೂರ್ಯ ದ್ರವ್ಯರಾಶಿಯ 4.3 ಮತ್ತು 3.3 ಪಾಲಿನಷ್ಟು ಇವೆ. ಬರಿಗಣ್ಣಿಗೆ ಕಾಣುವ ನಕ್ಷತ್ರಗಳನ್ನು ಉಜ್ವಲತೆಯ ರೀತಿ ಪಂಕ್ತಿಸಿದಾಗ ಸೂರ್ಯನಿಗೆ ಮೊದಲ ಮಣೆ: ಕಪೆಲ್ಲಾ ನಕ್ಷತ್ರಕ್ಕೆ ಐದನೆಯದು. ಈ ನಕ್ಷತ್ರದ ವಿಷುವದಂಶ 5 ಗಂ. 13 ಮಿ. 0 ಸೆ. ಮತ್ತು ಘಂಟಾವೃತ್ತಾಂಶ 450 ಮತ್ತು 570 ಉ. ಇದಕ್ಕೆ ಬ್ರಹ್ಮಹೃದಯ ಎಂದೂ ಹೆಸರಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ